ವಜ್ರಪೋಹ ಜಲಪಾತಗಳು (ವಜ್ರಪೋಯ ಜಲಪಾತಗಳು), ಭಾರತದ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿದೆ. ಈ ಜಲಪಾತವು ಜಾಂಬೋಟಿ ಗ್ರಾಮದಿಂದ ನೈಋತ್ಯ ದಿಕ್ಕಿನಲ್ಲಿ ಸುಮಾರು ೮.೫ ಕಿ.ಮೀ (೫.೩ ಮೈಲಿ) ದೂರದ ಕಾಡಿನಲ್ಲಿ ನೆಲೆಗೊಂಡಿದೆ. ಎತ್ತರದ ಬೆಟ್ಟದ ಮೇಲೆ ಗವಾಲಿ ಮತ್ತು ಚಾಪೋಲಿ ಗ್ರಾಮದ ನಡುವೆ, ಮಾಂಡೋವಿ ನದಿಯು ಸುಂದರವಾದ ವಜ್ರಪೋಹ ಜಲಪಾತವಾಗಿ ಹರಿಯುತ್ತದೆ. ಹಾಗೂ ಈ ಜಲಪಾತದ ಎತ್ತರ ಸುಮಾರು ೨೦೦ ಮೀ (೬೬೦ ಅಡಿ) ಆಗಿದೆ. ಇದು ಮಳೆಗಾಲದ ನಂತರ (ಜೂನ್-ಅಕ್ಟೋಬರ್) ಉತ್ತಮವಾಗಿ ಕಂಡುಬರುತ್ತದೆ. ಬೆಳಗಾವಿಯಿಂದ ನೈಋತ್ಯ ದಿಕ್ಕಿನಲ್ಲಿ ಸಾಗಿದರೆ ಸುಮಾರು ೧.೫ ಗಂಟೆಗಳಲ್ಲಿ ಈ ಜಲಪಾತವನ್ನು ತಲುಪಬಹುದಾಗಿದೆ. ಮಾಂಡೋವಿ ನದಿಯನ್ನು (ಮಹದಾಯಿ ನದಿ ಎಂದೂ ಕರೆಯುತ್ತಾರೆ) ಗವಳಿ, ಹೆಮ್ಮಡಗಾ, ಜಾಂಬೋಟಿ, ಕಣಕುಂಬಿ, ಮತ್ತು ತಾಳವಾಡೆ ಗ್ರಾಮಗಳ ಸಮೀಪವಿರುವ ಹೊಳೆಗಳಿಂದ ಪೋಷಿಸಲಾಗುತ್ತದೆ. ಪಶ್ಚಿಮ ಘಟ್ಟಗಳ (ಸಹ್ಯಾದ್ರಿ ಎಂದೂ ಕರೆಯಲ್ಪಡುವ) ಪರ್ವತ ಪ್ರದೇಶದಲ್ಲಿ ನೆಲೆಸಿರುವ ಈ ಪ್ರದೇಶವು ೩೮೦೦ ರಿಂದ ೫೭೦೦ ಮಿಲಿಮೀಟರ್ (೧೫೦ ರಿಂದ ೨೨೦ ಇಂಚು) ನಷ್ಟು ವಾರ್ಷಿಕ ಮಳೆಯನ್ನು ಪಡೆಯಬಹುದು. ಬೇಸಿಗೆಯ ತಿಂಗಳುಗಳಲ್ಲಿ (ಮಾರ್ಚ್-ಮೇ) ಹೊಳೆ ಮತ್ತು ನದಿ ನೀರಿನ ಮಟ್ಟವು ಕಡಿಮೆಯಾಗಬಹುದು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಕರ್ನಾಟಕದ ಮಹದಾಯಿ (ಮಾಂಡೋವಿ) ನದಿ, ವಜ್ರಪೋಹ ಜಲಪಾತ ಸೇರಿದಂತೆ ಸುಂದರವಾದ ಪ್ರದೇಶದ ಫೋಟೋಗಳು. ಗುಪ್ತ ಜಲಪಾತವನ್ನು ಪತ್ತೆಹಚ್ಚಲಾಗುತ್ತಿದೆ ವಜ್ರದ ಹನಿಗಳು ಮತ್ತು ಮಳೆಬಿಲ್ಲಿನ ಪರದೆಗಳು ಫೋಟೋಗಳು [೧]